Oneindia Mobile
New Videos here on ur Mozilla -Get them!
ದುಡಿಯುವ ಕೈಗಳು
ಶುಕ್ರವಾರ, ಮೇ 1, 2009, 16:49 [IST]



Mohanchand Patil
ದಣಿಯದೆ ದುಡಿಯುವ ಕೈಗಳಿಗೆ ಗೊತ್ತಿಲ್ಲ
ಗಂಡು ಹೆಣ್ಣೆಂಬ ಜಾತಿ ಭೇದ ಬೇಕಿಲ್ಲ
ವೇದ ಉಪನಿಷತ್ತು ಬೌದ್ಧಿಕ ಕರಾಮತ್ತು
ಅವುಗಳಿಗೆ ದುಡಿಯುವದೊಂದೇ ಗೊತ್ತು
ಅವುಗಳಿಲ್ಲದೆ ಮುಗಿಲ ಮುಟ್ಟುತಿದ್ದವೇನು
ಫಾರೋನ ಮಮ್ಮಿಗಳ ಮೇಲೆ ಪಿರಾಮಿಡ್ಡುಗಳು
ಛಳಿಗಾಳಿಗೆದೆಗೊಟ್ಟು ನಿಲ್ಲುತಿದ್ದವೇನು
ಸಾವಿರಾರು ಮೈಲುದ್ದ ಚೀನಾದ ಗೋಡೆಗಳು
ಬೆಳದಿಂಗಳೊಳು ಹೊಳೆಯುತ್ತಿದ್ದವೇನು
ತಾಜಮಹಲ ಗುಡಿಗೋಪುರ ಗುಂಬಜಗಳು
ಮಣ್ಣಿಂದ ಮೇಲೆದ್ದ ಅಕಾರಗಳಿಗೆ ನಗರಗಳಿಗೆ
ಇವನೆಲ್ಲ ಬೆಸೆಯುವ ಸೇತುವೆಗಳಿಗೆ
ಬೇಕು ಮಣ್ಣು ಹದಗೊಳಿಸುವ ಕೈಗಳು
ಯುಕ್ತಿಜನ್ಯ ವಿದ್ಯುನ್ಮಾನ ಯಂತ್ರಗಳಿಗೆ
ಬೇಕು ಚುರುಕು ಲವಲವಿಕೆಯ ಕೈಗಳು
ಕೈಯಿಲ್ಲದೆ ಕ್ರಾಂತಿಯಿಲ್ಲ ಉತ್ಕ್ರಾಂತಿಯೂ ಇಲ್ಲ
ಹೊಟ್ಟೆಹಸೆವ ಹಾವು ಉಡವಾಗುತಿರಲಿಲ್ಲ
ದುಡಿಯುವ ತುಡಿತಕೆ ಸಿಡಿದು ಬಂದ ಈ ಕೈಗಳು
ದಣಿಯುವ ಮುನ್ನ ಬೆವರಾರುವ ಮುನ್ನ
ತಕ್ಕ ಶ್ರಮಫಲ ಕೊಡದಿರೆ ಧಣಿಗಳು
ಕೇಳದೆ ಸುಮ್ಮನಿರುವವೇ ತಮ್ಮ ಪಾಲಿನ ಅನ್ನ

ಪೂರಕ ಓದಿಗೆ
'ಕಾರ್ಮಿಕ ದಿನ' ಎಂಬ ಅಸಂಬದ್ಧ ಆಚರಣೆ!



»Home »News  »Entertainment  »Currency  »Free Classifieds  »Cricket  »TV Schedules  »In Theatres  »Weather  »Languages  »Horoscope 

© Greynium Information Technologies Pvt. Ltd.