Oneindia Mobile
Super Song Lyrics Directory- Get here!
2ನೇ ತ್ರೈಮಾಸಿಕ :ಸತ್ಯಂಗೆ ಶೇ. 42 ರ ಲಾಭ
Friday, October 17 2008

ಬೆಂಗಳೂರು, ಅ.17: ಭಾರತದ ಸಾಫ್ಟ್ ವೇರ್ ಕ್ಷೇತ್ರದಲ್ಲಿ ನಾಲ್ಕನೇ ಅತಿ ದೊಡ್ಡ ಕಂಪೆನಿಯಾಗಿರುವ ಸತ್ಯಂ ಕಂಪ್ಯೂಟರ್ ಸರ್ವೀಸ್. ಲಿ ತನ್ನ ಎರಡನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ. ಈ ಬಾರಿ ಶೇ.42 ರಷ್ಟು ನಿವ್ವಳ ಲಾಭ ಗಳಿಸಿದೆ. ಆದರೆ ಪ್ರಸ್ತಕ ಆರ್ಥಿಕ ವರ್ಷದಲ್ಲಿ ಇತರೆ ಕಂಪೆನಿಗಳಂತೆ ಆದಾಯ ಉಳಿಕೆಯತ್ತ ಗಮನ ಹರಿಸಲಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಹೊರಗುತ್ತಿಗೆ, ಬ್ಯಾಕ್ ಆಫೀಸ್ ಸೇವೆ ಹಾಗೂ ವ್ಯಾವಹಾರಿಕ ತಂತ್ರಾಂಶ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಸತ್ಯಂ,ಸೆ. 30 ಕ್ಕೆ ಕೊನೆಗೊಂಡ ತ್ರೈಮಾಸಿಕದಂತೆ ಒಟ್ಟು 581 ಕೋಟಿ($120 million) ರು. ಲಾಭ ಗಳಿಸಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ 409 ಕೋಟಿ ರು ಗಳಿಸಿತ್ತು. ಜಿಇ , ನೆಸ್ಲೆ, ಕ್ವಾಂಟಸ್ ಏರ್ ವೇಸ್, ಏಮಿರೇಟ್ಸ್ ಬ್ಯಾಂಕ್ ಇಂಟರ್ ನ್ಯಾಷನಲ್ ಹಾಗೂ ಫಿಜಿಟ್ಸು ಸರ್ವೀಸ್ ನಂತಹ ದೊಡ್ಡದೊಡ್ಡ ಗ್ರಾಹಕರನ್ನು ಸತ್ಯಂ ಹೊಂದಿದೆ.

ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸತ್ಯಂ ನ ಪ್ರತಿಸ್ಪರ್ಧಿ ಇನ್ಫೋಸಿಸ್ ಸೇರಿದಂತೆ ಪ್ರಮುಕ ಐಟಿ ಕಂಪೆನಿಗಳು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆದಾಯ ಉಳಿಕೆ ಹಾಗೂ ಅನಗತ್ಯ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡುವತ್ತ ಗಮನ ಹರಿಸಿವೆ. ಯುಎಸ್ ಮಾರುಕಟ್ಟೆಯಲ್ಲಿ ಆಗಿರುವ ಹಣದುಬ್ಬರ ವ್ಯತ್ಯಯದಿಂದ ಭಾರತದ ಸಾಫ್ಟ್ ವೇರ್ ಕಂಪೆನಿಗಳಿಗೆ ಅರ್ಧದಷ್ಟು ಲಾಭ ಗಳಿಕೆ ನಿಂತು ಹೋಗಿದೆ.

(ದಟ್ಸ್ ಕನ್ನಡ ವಾರ್ತೆ)

ಆರ್ಥಿಕ ಬಿಕ್ಕಟ್ಟಿಗೆ ನಾರಾಯಣ ಮೂರ್ತಿ ಸಲಹೆ
2 ನೇ ತ್ರೈಮಾಸಿಕ ವರದಿ : ಸುಸ್ಥಿತಿಯಲ್ಲಿ ಇನ್ಫಿ
ಕಾರ್ಮಿಕರು ಮನೆಗೆ, ಐಟಿ ಮಂದಿ ಚೆನ್ನೈಗೆ


Oneindia Mobile

»Home »News  »Entertainment  »Currency  »Free Classifieds  »Cricket  »TV Schedules  »In Theatres  »Weather  »Languages  »Horoscope 

© Greynium Information Technologies Pvt. Ltd.