Oneindia Mobile
Photo Gallery!
ಸೈನಿಕ ದಾಳಿಯಲ್ಲಿ ಎಲ್ಟಿಟಿಇ ಪ್ರಭಾಕರನ್ ಹತ?
ಭಾನುವಾರ, ಮೇ 17, 2009, 15:23 [IST]

LTTE chief Prabhakaran
ನವದೆಹಲಿ, ಮೇ.17: ಲಿಬರೇಷನ್ ಟೈಗರ್ ಆಫ್ ತಮಿಳ್ ಈಳಂ (ಎಲ್ಟಿಟಿಇ) ಮುಖ್ಯಸ್ಥ ವಿ. ಪ್ರಭಾಕರನ್ ಮಿಲಿಟರಿ ದಾಳಿಯಲ್ಲಿ ಮೃತಪಟ್ಟಿದ್ದು ಕೊಲಂಬದಲ್ಲಿನ ಸೈನಿಕ ಶಿಬಿರಕ್ಕೆ ಪ್ರಭಾಕರನ್ ಮೃತ ದೇಹವನ್ನು ಕೊಂಡೊಯ್ಯಲಾಗಿದೆ ಎಂದು ಶ್ರೀಲಂಕಾದ ಸೈನಿಕ ಮೂಲಗಳು ದೃಢಪಡಿಸಿವೆ.

ಶ್ರೀಲಂಕಾ ಸೈನಿಕ ಮೂಲಗಳ ಪ್ರಕಾರ, ಎಲ್ಟಿಟಿಯ 150 ಮೃತ ದೇಹಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು ಅವುಗಳನ್ನು ಗುರುತಿಸುವ ಕಾರ್ಯ ಮುಂದುವರೆದಿದೆ. ಹಾಗೆಯೇ ಎಲ್ಟಿಟಿಇ ಒತ್ತೆಯಲ್ಲಿದ್ದ ನಾಗರಿಕರನ್ನು ಯುದ್ಧ ಭೂಮಿಯಿಂದ ವಿಮುಕ್ತಗೊಳಿಸಲಾಗಿದೆ ಎಂದು ತಿಳಿದ್ದಾರೆ.

ಎಲ್ಟಿಟಿಇಯೊಂದಿನ ದಾಳಿ ಮುಂದುವರಿದಿದ್ದು ಇನ್ನೂ ಅವರ ಮೇಲೆ ಸಂಪೂರ್ಣ ಹಿಡಿದ ಸಾಧಿಸಲು ಸಾಧ್ಯವಾಗಿಲ್ಲ. ಆದರೆ ಎಲ್ಟಿಟಿಇಯ ಮುಖ್ಯಸ್ಥರು ಸಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶ್ರೀಲಂಕಾ ಸರಕಾರ ತಿಳಿಸಿದೆ. ಸೈನಿಕ ಕಾರ್ಯಾಚರಣೆ ಮೂಲಕ ಎಲ್ಟಿಟಿಇಯನ್ನು ಸದೆ ಬಡಿದಿರುವುದಕ್ಕೆ ಶ್ರೀಲಂಕಾದ ಅಧ್ಯಕ್ಷ ಮಹಿಂದ್ರಾ ರಾಜಪಕ್ಸ ಹರ್ಷ ವ್ಯಕ್ತಪಡಿಸಿದ್ದಾರೆ.

(ಏಜೆನ್ಸೀಸ್)

ಶ್ರೀಲಂಕಾ : ಸೇನಾ ಕಾರ್ಯಾಚರಣೆ ಅಂತ್ಯ



»Home »News  »Entertainment  »Currency  »Free Classifieds  »Cricket  »TV Schedules  »In Theatres  »Weather  »Languages  »Horoscope 

© Greynium Information Technologies Pvt. Ltd.