Oneindia Mobile
NEED EXTRA CASH? Enter Your Email Here!

ಟ್ರಿನಿಡಾಡ್ ತಂಡಕ್ಕೆ ಲಾರಾ ಕೋಚ್?
ಭಾನುವಾರ, ಆಗಸ್ಟ್ 16, 2009, 11:33 [IST]

Brian Lara
ಪೋರ್ಟ್ ಆಫ್ ಸ್ಪೇನ್, ಆ.16: ಮುಂದಿನ ತಿಂಗಳು ನಡೆಯುವ ಚಾಂಪಿಯನ್ಸ್ ಲೀಗ್ ಟಿ-20೦ ವೇಳೆಗೆ ವೆಸ್ಟ್ ಇಂಡೀಸ್‌ನ ಬ್ಯಾಟಿಂಗ್ ದಂತಕಥೆ ಬ್ರಯಾನ್ ಲಾರಾ ಕೋಚ್ ಆಗಿ ಕಾರ್ಯ ನಿರ್ವಹಿಸುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ 2007ರಲ್ಲಿ ವಿದಾಯ ಘೋಷಿಸಿದ್ದ ಲಾರಾ ಅಕ್ಟೋಬರ್ 8ರಿಂದ 23ರವರೆಗೆ ನಡೆಯಲಿರುವ ಚಾಂಪಿಯನ್ಸ್ ಲೀಗ್‌ನಲ್ಲಿ ವೆಸ್ಟ್ ಇಂಡೀಸ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿ ಸುವ ಬಗ್ಗೆ ಟ್ರಿನಿಡಾಡ್ ಮತ್ತು ಟೊಬ್ಯಾಗೊ ಕ್ರಿಕೆಟ್ ಮಂಡಳಿಯೊಂದಿಗೆ ಮಾತುಕತೆ ನಡೆದಿದೆ.

ಕೋಚ್ ಸ್ಥಾನ ನಿರ್ವಹಿಸುವ ಬಗ್ಗೆ ಪ್ರಸ್ತಾಪ ಬಂದಿರುವುದು ನಿಜ. ಆದರೆ ಈ ಬಗ್ಗೆ ಇನ್ನಷ್ಟೇ ಮಾತುಕತೆ ನಡೆಯಬೇಕಿದೆ ಎಂದು ಸ್ಥಳೀಯ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಲಾರಾ ತಿಳಿಸಿದ್ದಾರೆ. ತಂಡದಲ್ಲಿ ಎಷ್ಟರ ಮಟ್ಟಿನ ಅಧಿಕಾರ ಇರುತ್ತದೆ ಎಂಬ ಬಗ್ಗೆ ಅನಗತ್ಯ ವಿವಾದ ಸೃಷ್ಟಿಸುವ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿರುವ ಲಾರಾ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತುಕತೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು. ನಿವೃತ್ತಿಯ ನಂತರ ಪರ್ಯಾಯ ಐಸಿಎಲ್‌ಗೆ ಸೇರ್ಪಡೆಗೊಂಡಿದ್ದ ಲಾರಾ ನಂತರ ಗಾಯದ ಸಮಸ್ಯೆಯಿಂದ ಸಂಬಂಧ ಕಡಿದುಕೊಂಡಿದ್ದರು.
(ದಟ್ಸ್ ಕನ್ನಡ ಕ್ರೀಡಾವಾರ್ತೆ)



»Home  »Kannada  »News  »Movies  »Font Help  »Sitemap 

© Greynium Information Technologies Pvt. Ltd.