Oneindia Mobile
NEED EXTRA CASH? Enter Your Email Here!

ದೇಶ ಸೇವೆ ಮಾಡಲು ಅಡ್ವಾಣಿ ನಾಲಾಯಕ್ : ಜಸ್ವಂತ್
ಶನಿವಾರ, ಆಗಸ್ಟ್ 29, 2009, 10:44 [IST]

L K Advani
ನವದೆಹಲಿ, ಆ. 29 : ಕಳೆದ ವರ್ಷ ಲೋಕಸಭೆಯಲ್ಲಿ ನಡೆದ ವೋಟಿಗಾಗಿ ನೋಟು ಹಗರಣದ ಸೂತ್ರದಾರ ಎಲ್ ಕೆ ಅಡ್ವಾಣಿ ಎಂದು ಉಚ್ಚಾಟಿತ ನಾಯಕ ಜಸ್ವಂತ್ ಸಿಂಗ್ ಆರೋಪಿಸಿದ್ದಾರೆ.

ಇದೊಂದು ಕರುಣಾಜನಕ ಕಥೆ. ಇಲ್ಲೊಬ್ಬರು ವ್ಯಕ್ತಿ ಇದ್ದಾರೆ. ಅವರದು ಪ್ರಧಾನಿಯಾಗುವ ಮಹತ್ವಾಕಾಂಕ್ಷೆ. ಅದಕ್ಕಾಗಿ ಅನೇಕ ತಪ್ಪುಗಳನ್ನು ಮಾಡುತ್ತಾರೆ. ವೋಟಿಗಾಗಿ ನೋಟು ಎಂಬ ಕೊಳಕು ಹಗರಣ ತಪ್ಪು ನಿರ್ಧಾರದ ಒಂದು ಉತ್ತಮ ಉದಾಹರಣೆ ಎಂಬುದು ನಿಮಗೆ ಗೊತ್ತೇ ? ಅವರು ಆ ಹೊತ್ತಿನಲ್ಲಿ ದೃಢ ನಿಲುವು ಕೈಗೊಂಡು ಇದು ಸರಿಯಲ್ಲಿ ಎನ್ನಲಿಲ್ಲ ಎಂಬ ವಿಚಾರ ನನ್ನನ್ನು ತೀವ್ರವಾಗಿ ಕಾಡುತ್ತಿದೆ. ಇಡೀ ನಾಟಕದ ಕೇಂದ್ರ ಬಿಂದು ಅಡ್ವಾಣಿ ಅವರು ಈ ದೇಶದ ಸೇವೆ ಮಾಡಲು ನಾಲಾಯಕ್ ಎಂದು ಜಸ್ವಂತ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.

ಹೀಗಂತ ಔಟ್ ಲುಕ್ ಸಂದರ್ಶನದಲ್ಲಿ ಕಿಡಿಕಾರಿರುವ ಸಿಂಗ್, ಕಳೆದ ವರ್ಷ ಲೋಕಸಭೆಯಲ್ಲಿ ಯುಪಿಎ ಸರಕಾರ ವಿಶ್ವಾಸಮತ ಕೋರಿದ ಸಂದರ್ಭದಲ್ಲಿ ಮೂವರು ಬಿಜೆಪಿ ಸಂಸದರು ನೋಟುಗಳ ಕಟ್ಟು ಪ್ರದರ್ಶಿಸಿದ್ದರು. ಸರಕಾರದ ಪರವಾಗಿ ಮತ ಹಾಕಲು ತಮಗೆ ಒಂದಿ ಕೋಟಿ ರುಪಾಯಿ ಆಮಿಷ ಒಡ್ಡಲಾಗಿತ್ತು ಎಂದು ಆರೋಪಿಸಿದ್ದರು.

ವೋಟಿಗಾಗಿ ನೋಟು ಪ್ರಕರಣದಲ್ಲಿ ಅಡ್ವಾಣಿ ಸಲಹೆಗಾರರಾಗಿದ್ದ ಸುಧೀಂದ್ರ ಕುಲಕರ್ಣಿ ಅವರು ಪಾಲು ಇದೆ. ಈ ಎಲ್ಲ ನಾಟಕ ಆಡಲು ಕುಲಕರ್ಣಿ ವಿಚಿತ್ರವಾದ ವ್ಯಕ್ತಿಯೊಬ್ಬನನ್ನು ಕರೆದುಕೊಂಡು ಬಂದಿದ್ದರು ಎಂದು ಆರೋಪಿಸಿದ್ದಾರೆ.

(ಏಜನ್ಸೀಸ್)



»Home  »Kannada  »News  »Movies  »Font Help  »Sitemap 

© Greynium Information Technologies Pvt. Ltd.