Oneindia Mobile
New Videos here on ur Mozilla -Get them!
ಕುರ್ಚಿ ಗಡಗಡ : ಕೋಡಿಮಠ ಭವಿಷ್ಯ ನಿಜ?
ಸೋಮವಾರ, ನವೆಂಬರ್ 2, 2009, 15:01 [IST]

Kodimatha Swamijis prediction on BSY comes true
ಬೆಂಗಳೂರು, ನ. 2 : ಡಿಸೆಂಬರ್ ಅಂತ್ಯದೊಳಗೆ ಕಾರ್ತೀಕ ಮಾಸದ ಅಸುಪಾಸಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಭಾರಿ ಗಂಡಾಂತರ ಎದುರಿಸುತ್ತಾರೆ ಎಂದು ಹಾಸನ ಜಿಲ್ಲೆಯ ಕೋಡಿಮಠದ ಕಾಲಜ್ಞಾನಿ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಹೇಳಿದ್ದ ಭವಿಷ್ಯ ಇದೀಗ ನಿಜವಾಗಲಿದೆಯೆ?

ಕಳೆದ ಮಾರ್ಚ್ ನಲ್ಲಿ ಶ್ರೀಗಳು ಬಿಜೆಪಿ ಸರಕಾರ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಕುರಿತಾಗಿ ಭವಿಷ್ಯ ನುಡಿದ್ದರು. ತಾಡೋಲೆ ಹೊತ್ತಿಗೆ ಭವಿಷ್ಯವನ್ನು ಯಾರು ನಂಬುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ರಾಜಕಾರಣಿಗಳು ಮಾತ್ರ ಚಾಚು ತಪ್ಪದೇ ಕೋಡಿಮಠದ ಭವಿಷ್ಯವನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಭಾರತದ ಪ್ರಧಾನಮಂತ್ರಿಯಿಂದ ಹಿಡಿದು ಅನೇಕ ಘಟಾನುಘಟಿ ರಾಜಕೀಯ ನೇತಾರರು ಕೋಡಿಮಠಕ್ಕೆ ಭೇಟಿ ನೀಡಿ ಭವಿಷ್ಯ ಕೇಳಿದ್ದು ಈ ಮಠದ ಹೆಗ್ಗಳಿಕೆ. ಏನೇ ಇರಲಿ. ಕಳೆದ ಮಾರ್ಚ್ ನಲ್ಲಿ ಶ್ರೀಗಳು ಹೇಳಿದ್ದ ಭವಿಷ್ಯ ಇಂದು ನಿಜವಾಗಿದೆ. ಡಿಸೆಂಬರ್ ಒಳಗೆ ಯಡಿಯೂರಪ್ಪ ಅವರ ಕುರ್ಚಿಗೆ ಗಂಡಾಂತರವಿದೆ ಎಂದು ಹೇಳಿದ್ದರು. ಅದೀಗ ನಿಜವಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೋಡಿಮಠದ ಮಠಾಧೀಶ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು, ಕಾಲ ಮಿಂಚಿ ಹೋದ ಮೇಲೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವೆ ಶೋಭಾ ಕರಂದ್ಲಾಜೆ ನಮ್ಮನ್ನು ಸಂಪರ್ಕಿಸಿದ್ದಾರೆ. ಯಡಿಯೂರಪ್ಪ ತಮ್ಮ ಆಡಳಿತಾವಧಿಯಲ್ಲಿ ಅನೇಕ ತಪ್ಪು ಹೆಜ್ಜೆಗಳನ್ನು ಇರಿಸಿದ್ದಾರೆ. ಸದ್ಯ ಏನೂ ಮಾಡಲು ಅಸಾಧ್ಯ ಎಂದು ಶ್ರೀಗಳು ಖಡಾಖಂಡಿತವಾಗಿ ಹೇಳಿದ್ದಾರೆ. ನವೆಂಬರ್ 8ರವರೆಗೆ ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡಬೇಡಿ ಎಂದು ಅಧಿಕಾರಿಗಳು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ತಾವು ಹೆಚ್ಚೇನೂ ಹೇಳುವುದಿಲ್ಲ ಎಂದು ಶ್ರೀಗಳು ನುಡಿದಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)



»Home »News  »Entertainment  »Currency  »Free Classifieds  »Cricket  »TV Schedules  »In Theatres  »Weather  »Languages  »Horoscope 

© Greynium Information Technologies Pvt. Ltd.