Oneindia Mobile
New Videos here on ur Mozilla -Get them!
ಬಿಕ್ಕಟ್ಟು ಅಂತ್ಯ ನವದೆಹಲಿಯಲ್ಲಿ ಸಿಎಂ ಹೇಳಿಕೆ
ಶನಿವಾರ, ನವೆಂಬರ್ 7, 2009, 12:31 [IST]

Yeddyurappa says crisis has been resolved
ನವದೆಹಲಿ, ನ.7: ಬಿಜೆಪಿಯಲ್ಲಿನ ಬಿಕ್ಕಟ್ಟು ಅಂತ್ಯವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವದೆಹಲಿಯಲ್ಲಿ ಶನಿವಾರ ತಿಳಿಸಿದರು. ವರಿಷ್ಠರೊಂದಿಗೆ ಚರ್ಚಿಸಲಾಗಿದ್ದು ನಾಯಕತ್ವ ಬದಲಾವಣೆ ಸೇರಿದಂತೆ ಪಕ್ಷದಲ್ಲಿನ ಭಿನ್ನಮತ ಸಮಸ್ಯೆ ಪರಿಹಾರವಾಗಿದೆ ಎಂದು ಅವರು ಹೇಳಿದರು.

ಎಲ್ಲ ಸಮಸ್ಯೆಗಳೂ ಪರಿಹಾರವಾಗಿವೆ. ಸಮಸ್ಯೆಯನ್ನು ಪರಿಹರಿಸಿದ ಪಕ್ಷದ ವರಿಷ್ಠರಿಗೆ ನನ್ನ ಧನ್ಯವಾದಗಳು. ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ. ಯಾರನ್ನೂ ಕಡೆಗಣಿಸುವುದಿಲ್ಲ ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

ಬಿಕ್ಕಟ್ಟು ಕುರಿತಂತೆ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಲು ಯಡಿಯೂರಪ್ಪ ನವದೆಹಲಿಗೆ ಆಗಮಿಸಿದ್ದರು. ಜಮ್ಮುವಿನ ವೈಷ್ಣೋದೇವಿ ಮಂದಿರಕ್ಕೆ ಹೊರಡುವ ಮುನ್ನ ಯಡಿಯೂರಪ್ಪ್ಪ ರಾಜ್ಯದಲ್ಲಿ ಬಿಜೆಪಿ ಸರಕಾರ ಸಂಪೂರ್ಣ ಐದು ವರ್ಷಗಳ ಕಾಲಾವಧಿಯನ್ನು ಪೂರೈಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

(ಏಜೆನ್ಸೀಸ್)



»Home »News  »Entertainment  »Currency  »Free Classifieds  »Cricket  »TV Schedules  »In Theatres  »Weather  »Languages  »Horoscope 

© Greynium Information Technologies Pvt. Ltd.