Oneindia Mobile
Todays Top Searches- Get here NOW!
ದೇವರ ಆಸ್ತಿ ಉಳಿಸಲು ಮುಸ್ಲಿಮರ ನಿರಶನ
ಶನಿವಾರ, ನವೆಂಬರ್ 14, 2009, 14:39 [IST]

ಹಾಸನ, ಜ 14: ಇತಿಹಾಸ ಪ್ರಸಿದ್ದ ಬೇಲೂರು ಚನ್ನಕೇಶವ ದೇಗುಲದ ಆಸ್ತಿ ಅಕ್ರಮ ಮಾರಾಟ ಹಗರಣದ ತನಿಖೆಗೆ ಆಗ್ರಹಿಸಿ ದೇವಾಲಯ ಆಸ್ತಿ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ನಿರಶನ 16ನೇ ದಿನಕ್ಕೆ ಕಾಲಿಟ್ಟಿದ್ದು ಕೆಲವು ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ (ನ 13) ನಿರಶನ ನಡೆಸಿದರು.

ದೇವಾಲಯದ ಆಸ್ತಿಯನ್ನು ಅಕ್ರಮ ಮಾರಾಟ ಮಾಡಿರುವುದು ಹೀನಕೃತ್ಯ. ದೇವಾಲಯದ ಆಸ್ತಿ ವಾಪಸ್ ಪಡೆಯ ಬೇಕು ಮತ್ತು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ದರ್ಗಾ ಸಮಿತಿ ಅಧ್ಯಕ್ಷರು ಎಚ್ಚರಿಸಿದ್ದಾರೆ.

(ಏಜೆನ್ಸೀಸ್)



»Home »News  »Entertainment  »Currency  »Free Classifieds  »Cricket  »TV Schedules  »In Theatres  »Weather  »Languages  »Horoscope 

© Greynium Information Technologies Pvt. Ltd.