Monday, November 03 2008
* , ವಿಸ್ಕಾನ್ ಸಿನ್, ಯುಎಸ್ ಎ
ಹೋಗಿದ್ದೆ ನಾನಂದು ಶಿಕಾಗೊಗೆ ನೋಡಲು 'ಅಕ್ಕ'
ನೋಡಿದ್ದು ಅಲ್ಲಿ ಬರೀ ಚೆಲುವೆಯರನ್ನೇ 'ಅಕ್ಕ-ಪಕ್ಕ'
ಅದರಲ್ಲೊಬ್ಬಳು ಬಂದು ನಕ್ಕು ಕುಳಿತಾಗ ನನ್ನ 'ಪಕ್ಕ'
ಸಾರ್ಥಕವೆನಿಸಿತ್ತು ನಾ ಕೊಟ್ಟಿದ್ದ ಎಂಟ್ರಿ 'ರೊಕ್ಕ'
ಸುರುವಾದಾಗ ನನ್ನ ಮನದಲ್ಲೊಂದು 'ಥೈಯಾ ತಕ'
ಅಂದುಕೊಂಡೆ, ನಾ ಕೇಳಿಬಿಡಲೇ ಇವಳ 'ಜಾತಕ'
ಅಷ್ಟರಲ್ಲೇ ಓಡಿ ಬಂತು ಅವಳಲ್ಲಿಗೆ ಮಗುವೊಂದು 'ಚಿಕ್ಕ'
ಹೇಳುತ್ತಾ "ಅಮ್ಮಾ..ಮಾಡಿದ್ದೇನೆ ನಾ ಚಡ್ಡಿಯಲ್ಲಿ 'ಕಕ್ಕ'
ಜಾಗ ಖಾಲಿಮಾಡಿದ್ದೆ ನಾ ಹೇಳುತ್ತಾ "ಬರುತ್ತೆನಕ್ಕಾ"